Search This Blog
Saturday, March 8, 2014
Monday, March 29, 2010
ಇದು ಇತ್ತೀಚಿಗೆ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ
Tuesday, August 11, 2009
ಓಟಿಗೆ ಬೇಕು ನಾವು - ಅಧಿಕಾರ ದೊರೆತ ಬಳಿಕ ಯಾರಿಗೂ ಬೇಡ ನಮ್ಮ ನೋವು
ಇದು ಕರಾವಳಿಯ ಜನತೆ ಕಳೆದ ಒಂದು ವರ್ಷದಿಂದ ರಾಜಕಾರಣಿಗಳಿಗೆ ಹಾಕುತ್ತಿರುವ ಶಾಪ. ನಮಗೆಲ್ಲ ತಿಳಿದಿರುವಂತೆ ದಶಕಗಳಿಂದಲೂ ಕರಾವಳಿ ಜಿಲ್ಲೆಯ ಜನತೆ ಕಮಲ ಪಕ್ಷವನ್ನು ನಿಷ್ಠೆಯಿಂದ ಬೆಂಬಲಿಸುತ್ತಾ ಬಂದಿದ್ದಾರೆ. ಹಿಂದುತ್ವದ ಮೇಲಿನ ಅಚಲವಾದ ವಿಶ್ವಾಸ ಹಾಗೂ ಬಿಜೆಪಿಯೊಂದೇ ಆಶಾಕಿರಣ ಎಂಬ ನಂಬಿಕೆಯಿಂದ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದ ತುಳುವರಿಗೆ ಬಿಜೆಪಿ ಸರ್ಕಾರ ಕೊಟ್ಟಿದ್ದಾದರೂ ಏನು ? ವಿಪಕ್ಷದಲ್ಲಿರುವಾಗ ಅಡಿಕೆ ಬೆಳೆಗಾರರ ಹಿತ ರಕ್ಷಣೆಗಾಗಿ ಪಾದಯಾತ್ರೆ, ರಥಯಾತ್ರೆಗಳನ್ನು ನಡೆಸಿದ ಸದಾನಂದ ಗೌಡರೇ ಕಮಲ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ, ಅಲ್ಲದೆ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರಎಷ್ಟು ಮುಖ್ಯವಾಗಿತ್ತೆಂದು ವಿರೋಧ ಪಕ್ಷಗಳಿಗೂ ಗೊತ್ತು. ಆದರೆ ಅಡಿಕೆ ಬೆಳೆಗಾರ ಬೆಲೆಕುಸಿತದಿಂದ ಕಂಗಾಲಾಗಿದ್ದಾನೆ. ಜತೆಗೆ ನೇತ್ರಾವತಿ ತಿರುವು ಯೋಜನೆ ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ಜಿಲ್ಲೆಯ ಪ್ರಮುಖ ಅಡಿಕೆ ಬೆಳೆಯುವ ಪ್ರದೇಶಗಳಿಗೆ ಮರಣ ಶಾಸನವಾಗಲಿರುವುದು ಗೌಡರಿಗೆ ಗೊತ್ತು. ಆದರೆ ಪಕ್ಷ ರಾಜಕೀಯದ ಅಮಲಿನಲ್ಲಿ ಮತ್ತು ಪಕ್ಷ ನಿಷ್ಠೆ ಎಂಬ ಮತ್ತಿನಲ್ಲಿ ಮುಳುಗಿರುವ ಇವರಿಗೆ ಯೋಜನೆ ವಿರೋಧಿಸಿ ಚಿಕ್ಕ ಹೇಳಿಕೆ ಕೊಡುವಷ್ಟು ಸೌಜನ್ಯವೂ ಇಲ್ಲದಾಗಿದೆ. ಹಿಂದುತ್ವ ರಾಜಕೀಯಕ್ಕೆ ತಮ್ಮ ಜೀವವನ್ನೇ ಕೊಟ್ಟ ಎಷ್ಟೋ ಮನೆಗಳು ತಿರುವು ಯೋಜನೆಯಿಂದಾಗಿ ನೆಲೆಕಳೆದುಕೊಳ್ಳಲಿವೆ. ಆದರೆ ಗೌಡರು ಮಾತ್ರ ಹಲ್ಲು ಕಿಸಿಯುತ್ತಾ ವಿಧಾನ ಸೌಧ ದಲ್ಲಿ ಪುಕ್ಕಟೆ ಚಹಾ ಸವಿಯುವುದರಲ್ಲಿ ಬ್ಯುಸಿಯಾಗಿದ್ದಾರೆ.
Friday, July 31, 2009
ತುಂಬೆ ಅಣೆಕಟ್ಟು - ಮಂಗಳೂರಿನ ಜೀವನಾಡಿ.
Subscribe to:
Posts (Atom)






